ದಿನಕ್ಕೊಂದು ನನ್ನದೊಂದು ಮಾತು - ಒಂದು
ಪ್ರತಿ ದಿನ ನನಗನ್ನಿಸಿದ ಒಂದೆರಡು ಸಾಲುಗಳನ್ನು ಬರೆಯುವ ಪ್ರಯತ್ನಕ್ಕೆ ಇದು ನನ್ನ ಮೊದಲ ಸೇರ್ಪಡೆ. ಹಲವು ದಿನಗಳ ನಂತರ ಬರೆಯುವ ನನ್ನ ಬಯಕೆಗೆ ಸಾಲುಗಳು ಸುಲಭವಾಗಿ ದೊರೆಯಲೆಂದು ನನ್ನ ಯೋಚನಾ ಲಹರಿಗೆ ಮೊದಲು ಮನವಿ. ಬರೆದದ್ದನ್ನು ಓದುಗನಿಗೆ ತಲುಪಿಸುವ ಬಗ್ಗೆ ಚಿಂತನೆ ಮಾಡಲು ಸಾಕಷ್ಟು ಸಮಯವಿದೆ. ಬರಹಗಳು ಪಕ್ವವಾಗಬೇಕು. ಓದುಗ ಆಸಕ್ತಿ ಕಳೆದುಕೊಳ್ಳಬಾರದು. ಆ ಹಂತ ತಲುಪಲು ಸ್ವಲ್ಪ ಸಮಯದ ಅವಶ್ಯಕತೆ ಇದೆ. ಅಲ್ಲಿಯವರೆಗೂ ಕ್ರಮಬದ್ಧವಿಲ್ಲದೆ ಕಟ್ಟಿದ ಸಾಲುಗಳಿಗೆ ನಾನೇ ಹೊಣೆ.
No comments:
Post a Comment