ದಿನಕ್ಕೊಂದು ನನ್ನದೊಂದು ಮಾತು - ನಾಲ್ಕು
ದಿನಕ್ಕೊಂದು ನನ್ನಗನ್ನಿಸಿದ ಮಾತೊಂದನ್ನು ಬರೆಯುವ ಆಸೆ ಕುಂಟುತ್ತ ಸಾಗಿದೆ. ಇದಕ್ಕೆ ನನ್ನ ವಿಶ್ಲೇಷಣೆ - ರಚನಾತ್ಮಕತೆಯ ಕೊರತೆ, ಶಿಸ್ತಿನ ಕೊರತೆ ಹಾಗು ಭಾಷೆಯ ಮೇಲಿನ ಹಿಡಿತದ ಕೊರತೆ. ಈ ನನ್ನ ಕೊರತೆಗಳಲ್ಲಿ ಅಪಾಯಕಾರಿಯಾದದ್ದು ಮೂರನೆಯದು. ಬರೆಯಬೇಕನ್ನಿಸಿದ್ದು ಆಂಗ್ಲ ಮಿಶ್ರಿತ ಕನ್ನಡ ಪದಗಳಲ್ಲಿ ಮನಸಿನಲ್ಲಿ ಒಂದು ಅಸ್ಪಷ್ಟ ರೂಪ ತೆಗೆದುಕೊಳ್ಳುತ್ತದೆ. ಕನ್ನಡದಲ್ಲಿ ಬೇಕಾದ ಅಂಗ್ಲ ಪದಗಳ ತರ್ಜುಮೆಗೆ ಅಂತರ್ಜಾಲದಲ್ಲಿ ಸ್ವಲ್ಪ ಕಾಲ ವ್ಯಯವಾಗುತ್ತದೆ. ಆದಷ್ಟು ಬೇಗ ಅದರಿಂದ ಆಚೆ ಬರುವ ಮಾರ್ಗ ಹುಡುಕಬೇಕು - ಹೆಚ್ಚು ಕನ್ನಡ ಸಾಹಿತ್ಯ ( ಕಥೆ, ಕವನ, ದಿನಪತ್ರಿಕೆ, ಮುಂತಾದವು ) ಓದುವುದು ಒಂದೇ ಮಾರ್ಗ. ಇದು ಇತರ ಎರಡು ಕೊರತೆಗಳ ಕಡಿವಾಣಕ್ಕು ಸಹಕಾರಿಯಾಗುತ್ತದೆ. ಅಲ್ಲಿವರೆಗೂ ಇಂತಹ ಕಚ್ಚಾ ಬರಹಗಳ ಪ್ರಯೋಗ ನಡೆಯುತ್ತಲೇ ಇರುತ್ತದೆ.
No comments:
Post a Comment